ಹೂಲಿಕಟ್ಟಿ: ಭಾರತ ಸರಕಾರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನವದೆಹಲಿ ಸಹಯೋಗದಲ್ಲಿ 

ಆಯೋಜನೆ ಗೊಂಡ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಶಾಲಾ ಸಭಾಂಗಣದಲ್ಲಿ ಸ್ಮಾರ್ಟ್ ಬೋರ್ಡ ಮೂಲಕ ಶಾಲಾ ವಿದ್ಯಾರ್ಥಿಗಳು ವಿಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ನೇರ ಪ್ರಸಾರದ ಮೂಲಕ ಸಂವಾದದಲ್ಲಿ ದೇಶದ ವಿವಿಧ ಭಾಗದ  ವಿವಿಧ ರಾಜ್ಯ ಗಳ ಶಿಕ್ಷಕರು ಹಾಗೂ ಮಕ್ಕಳು ಕೇಳುವಪ್ರಶ್ನೆ ಗಳಿಗೆ ಉತ್ತರಿಸುತ್ತ  ಈ ಮೇಲಿನಂತೆ ಹಲವಾರು ಪ್ರಶ್ನೆ ಗಳಿಗೆ ಉತ್ತರಿಸುತ್ತ ಮಕ್ಕಳ ಮನ ಸೂರೆಗೊಂಡರು. 

ಈ ಎಲ್ಲ ಸಂವಾದ ವನ್ನು ಸಮಚಿತ್ತದಿಂದ ಮಕ್ಕಳು ವೀಕ್ಷಿಸಿದರು ನಂತರ ಪ್ರಧಾನಿ ಯವರು ಮಾತನಾಡಿದ ವಿಚಾರಗಳನ್ನು ಹಿಂದಿ ಶಿಕ್ಷಕರಾದ ಶ್ರೀಮತಿ ಎಸ್ ಕೆ ಕದಂ ರವರು  ಕನ್ನಡದಲ್ಲಿ ವಿವರಿಸಿದರು ಅರ್ಥ ಪೂರ್ಣವಾದ  ಮತ್ತು ಉಪಯುಕ್ತ ಕಾರ್ಯಕ್ರಮಕ್ಕೆ ಮಕ್ಕಳು ಹರ್ಷ ವ್ಯಕ್ತ ಪಡಿಸಿದರು  ವಿಕ್ಷಣೆ ಮಾಡಿದ ಮಾಹಿತಿಯನ್ನು  ಬರೆದು ಕೊಂಡು ಬರುವಂತೆಮಕ್ಕಳಿಗೆ ಮುಕ್ಯೋಪಾಧ್ಯಾರಾದ  ಜಿ ಎಚ್ ನಾಯಕ ರವರು ಮಾತನಾಡುತ್ತ ಅಳವಡಿಸಿಕೊಳ್ಳುವಂತೆ ತಿಳಿಸಿದರು, ಈ ಸಂದರ್ಭದಲ್ಲಿ ಡಾ ಎಸ್ ಬಿ ಹಲಸಗಿ,ಎಸ್ ಎಸ್ ಹಿರೇಮಠ, ಎ ಎಸ್ ಅಡಕಿ,ಎಲ್ ಎಕ್ ಕಣಬರಗಿ, ಬಿ ಎಸ್ ಪಾಟೀಲ, ಕಾಂಚನಾ ಕದ್ದು ಅಂಬಿಕಾ ಹಂಚಿನಮನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.